ಕ್ವಿಟ್ ಇಂಡಿಯಾ ಚಳುವಳಿಯ ನಂತರ ಇತ್ತೀಚಿನವರೆಗೂ ನಮ್ಮಲ್ಲಿ ಮಹತ್ವದ ಯಾವ ಚಳುವಳಿಯೂ ನಡೆಯಲಿಲ್ಲ ಎನ್ನುವ ಕೊರತೆಯನ್ನು ನಮ್ಮ ( ಈ ಗ ಮಾಜಿ) ಮಂತ್ರಿಣಿ ಶ್ರೀಮತಿ ರೇಣುಕಾ ಚೌಧರಿ ಯವರು ನೀಗಿಸಿದ್ದಾರೆ. ನಮಗೆ ' ಪಬ್ ಗೆ ನುಗ್ಗಿ ' ಯಂತಾ ಚಳುವಳಿಯನ್ನು ಯನ್ನು ಸೂಚಿಸಿ ದೇಶದ ಚರಿತ್ರೆಯಲ್ಲಿ ಅಮರರಾಗಿಬಿಟ್ಟಿದ್ದಾರೆ. ನಮ್ಮ ಯುವಕ ಯುವತಿಯರು ರೋಮಾಂಚನ ಗೊಂಡಿದ್ದು ಈ ಚಳುವಳಿ ಯಲ್ಲಿ ತೊಡಗಲು ಶ್ರೀಮತಿ ರೇಣುಕಾರೆ ನಾಯಕಿಯಾಗಿ ನಮ್ಮನ್ನು ಮುನ್ನಡೆಸಬೇಕೆಂದು ಬಯಸಿದ್ದಾರೆ.( ಈಗಂತೂ ಚುನಾವಣೆಯಲ್ಲಿ ಸೋತು free ಆಗಿದ್ದಾರೆ). ಹಲವು ಕಾರಣಗಳಿಂದಾಗಿ ಮಹಾತ್ಮಾ ಗಾಂಧೀ ಯವರ ಉಪಿನ ಚಳುವಳಿ ಯಂತೆ ಹೆಜ್ಜೆ ಹೆಜ್ಜೆ ಗೂ ಮಾರ್ಗದರ್ಶನ ಬೇಕಾದ ಚಳುವಳಿ ಇದೆಂದು ನಮ್ಮೆಲ್ಲರ ಅಭಿಪ್ರಾಯ.
ಉದಾಹರಣೆಗೆ : ನಮ್ಮೆಲ್ಲರ ಮನೆಯಲ್ಲಿ ಹಿರಿಯರು ಈ ಚಳುವಳಿ ಯನ್ನು ವಿರೋದಿಸುತ್ತಿದ್ದಾರೆ. ಇದರ ಮಹತ್ವ ತಿಳಿಯದೆ ' ನೀವಿನ್ನೂ ಓದಬೇಕು - ನಿಮಗಿನ್ನೂ ೧೩-೧೪ ವರ್ಷ -ನೀವು ದುಡಿದಾಗ ಪಬ್ಬಲ್ಲೋ ಕ್ಲಬ್ಬಲ್ಲೋ ಏನಾದ್ರೂ ಕುಡಿದು ಹಾಳಾಗಿ - ಈಗ ಪಾಕೆಟ್ ಹಣ , ಊಟ ಬೇಕಾದ್ರೆ ತೆಪ್ಪಗೆ ಮನೆಲಿರಿ ' ಅಂತ ಹೇಳುತ್ತಿದ್ದಾರೆ. ( ಸ್ವಾತಂತ್ಯ್ರ ಸಂಗ್ರಾಮಕ್ಕೆ ಹೊರಟ ಯುವಕ ಯುವತಿಯರನ್ನೂ ಹೀಗೇ ಹಿರಿಯರು ವಿರೋಧಿಸುತ್ತಿದ್ದರು ಬಿಡಿ, ನಾವು ವಿರೋಧವನ್ನು ಲೆಕ್ಕಿಸುವುದಿಲ್ಲ ) . ಆದರೆ ಪಬ್ ನಲ್ಲಿ ನಾವು ಬಿಲ್ ಹಣ ಕೊಡದೆ ಹೋದರೆ ಪಬ್ ನವರು ' ರುಬ್ ಬಲು' ಹೇಳಬಹುದು. ( ನಮಗ್ಯಾರಿಗೂ ರುಬ್ಬಲು ಬರುವುದಿಲ್ಲ - ' ರುಬ್ಬಲು ನುಗ್ಗಿ' ಎಂದರೆ ಏನು ಮಾಡೋಣ? ). ಪಬ್ ನಲ್ಲಿ ಖರ್ಚು ಮಾಡಲು ನಮ್ಮ ಬಳಿ ಇರುವ ಪಾಕೀಟು ಮನಿ ಸಾಲುವುದಿಲ್ಲ ಅಂತ ನಿಮಗೆ ಗೊತ್ತೆ ಇದೆ. ಆದ್ದರಿಂದ ತಾವು ಮುಂದಾಗಿ ಬಂದು ನಮ್ಮನ್ನು ಪಬ್ ಗಳ ಕಡೆಗೆ ಮುನ್ನಡೆಸಿ ನಮ್ಮ ಗುರಿ ಈಡೇರಿದನನ್ತರ ಸುರಕ್ಸಿತವಾಗಿ ಹೊರಗೆ ( ಪಬ್ ನಿಂದ ಹೇಗಾದರೂ ) ಕರೆತರಬೇಕು. ಸಾದ್ಯವಾದರೆ ಮನೆವರೆಗೂ ಬಂದು ನಮ್ಮ ಹಿರಿಯರಿಗೆ ಈ ಚಳುವಳಿಯ ಮಹತ್ವವನ್ನು ಮನಗಾಣಿಸಿ ಕೊಡಬೇಕು ಎಂದು ನಮ್ಮ ವಿನಂತಿ. ತಾವು ಇಷ್ಟು ಉಪಕಾರ ಮಾಡಿದಲ್ಲಿ ಈ ಸಲ ಅಲ್ಲದೆ ಎಂದೆಂದಿಗೂ ನಮ್ಮೆಲ್ಲರ ವೋಟು ನಿಮ್ಮ ಪಕ್ಷಕ್ಕೆ ಎಂದು ನಿಮಗೆ ವಚನ ಕೊಡುತ್ತೇವೆ. ಈ ದೇಶವನ್ನು ಇಟಲಿಯಂತೆ ಅಭಿವೃದ್ದಿ ಪಡಿಸುವ ನಿಮ್ಮ ಕೆಲಸದಲ್ಲಿ ನಾವು ನಿಮ್ಮೊಂದಿಗಿದ್ದೇವೆ.
-----ಕರ್ನಾಟಕದ ಮುಗ್ದ ಯುವಕ ಯುವತಿಯರು.
About Me
- prabhakar
- BANGALORE, KARNATAKA, India
- I think now is the time for me to tell people what I think.
Subscribe to:
Post Comments (Atom)
It is an irony that all those politicians like Laloo, Paswan, Mulayam, Communists and Deve Gowda and some from Congress like Renuka, Margaret Alva who were too aggressive in showing their 'secular credentials' and attacked Hinduism have lost in these parliamentary elections.
ReplyDelete