About Me

My photo
BANGALORE, KARNATAKA, India
I think now is the time for me to tell people what I think.

Wednesday, May 27, 2009

' ರುಜುವಾತು ' ನಲ್ಲಿ ಅನಂತಮೂರ್ತಿ ಯವರು ಬರೆದ " ಈವತ್ತಿನ ರಾಜಕಾರಣದಲ್ಲಿ ನಾವು, ನೀವು " ಲೇಖನದಲ್ಲಿನ ಅಭಿಪ್ರಾಯಗಳಿಗೆ ನನ್ನ ಪ್ರತಿಕ್ರಿಯೆ

ಅನಂತಮೂರ್ತಿಯವರೆ, ನಿಮ್ಮ rujuvaatu.ಕಾಮ್ ನಲ್ಲಿನ ನಿಮ್ಮ ಲೇಖನಕ್ಕೆ ನನ್ನ ಈ ಪ್ರತಿಕ್ರಿಯೆ ಪ್ರಕಟಿಸದಿದ್ದರಿಂದ ನನ್ನದೇ ಬ್ಲಾಗ್ನಲ್ಲಿ ಬರೆಯಬೇಕಾಗಿದೆ.
BJP ಯನ್ನು ಅನೈತಿಕ ವೆಂದು ನಂಬುವ ನೀವು ರಾಜಕೀಯವನ್ನು ಎಷ್ಟು ವಸ್ತುನಿಷ್ಟವಾಗಿ ನೋಡಲು ಸಾಧ್ಯ ಅನ್ನುವದಕ್ಕೆ ನಿಮ್ಮ ಈ ಹೇಳಿಕೆಗಳು ಸಾಕ್ಷಿ-
" ಒರಿಸ್ಸಾದಂತೆಯೇ ಇಲ್ಲಿಯೂ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದೆ ", " ಈಗ ಅವರೇ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದ್ದಾರೆ. '". " ಮುಸ್ಲಿಮರ ಮೇಲೆ ಧಾಳಿ ನಡೆಸಿದಾಗ ಕ್ರಿಶ್ಚಿಯನ್ನರು ಸುಮ್ಮನಿದ್ದರು ". "....ಎನ್.ಡಿ.ಟಿ.ವಿಯ ಚರ್ಚೆಯಲ್ಲಿ - " ಸಂಘಪರಿವಾರದ ನಾಯಕರು ತಮ್ಮ ಪರಿವಾರದ ಸಮೇತ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದರು ಎಂದರೆ ಬಾಯಿಗೆ ಬಂದಂತೆ ತಮ್ಮ ವಿರೋಧಿಗಳನ್ನು ನಿಂದಿಸಿದರು ". "ಸದ್ಯದಲ್ಲಿ ನಾವೇನು ಮಾಡಬೇಕು? . ಕಾಂಗ್ರೆಸ್ಸೇತರ ರಾಜಕಾರಣದ ಲೋಹಿಯಾ ಯುಗ ಮುಗಿದಿದೆ. ಈಗ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ".

"ಮುಸ್ಲಿಮರ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದರು " ಅನ್ನುವಾಗ ಮುಸ್ಲಿಮರೂ ಹಿಂದುಗಳ ಮೇಲೆ ಬಾಂಬ ಹಾಕಿದರು, ಗೋಧ್ರಾ ದಲ್ಲಿ ಹಿಂದೂಗಳ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯನ್ನರು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಪುಸ್ತಕ ಹಂಚಿದರು ಅನ್ನುವದು ನಿಮ್ಮ ವಸ್ತುನಿಷ್ಠತೆಗೆ ಕಾಣಿಸುವದಿಲ್ಲವೇ ? ನಿಮ್ಮ ಜಾಣ ಮರೆವಿಗೆ ಇನ್ನು ಯಾವ ಪ್ರಶಸ್ತಿ ಬರುವುದು ಬಾಕಿ ಇದೆ?

ನಿಮಗೆ ನಿಮ್ಮದೇ ಮಾತನ್ನು ಜ್ನಾಪಿಸುತ್ತೇನೆ. ಮುಸ್ಲಿಮರು ನಿಮ್ಮನ್ನು ಭಾಷಣ ಮಾಡಲು ಕರೆದಾಗ ಅಲ್ಲಿ ಹೋಗಿ " ಮುಂಬಾಯಿ ಯಲ್ಲಿ AK 47 ಹಿಡಿದುಕೊಂಡು ಎಲ್ಲರನ್ನು ಸಾಯಿಸುತ್ತಾ ಹೊರಟವನ ಮನಸ್ಸಿನ ನೋವನ್ನು ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂದ ನೀವು, " ಮುಸ್ಲಿಮರ ಮೇಲೆ ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದವರ ಮನಸ್ಸಿನ ನೋವನ್ನೂ ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂತ ಯಾಕೆ ಹೇಳುವುದಿಲ್ಲ? ಹೇಳಬಹುದಿತ್ತಲ್ಲ? ಹಾಗೆ ಹೇಳಿದಲ್ಲಿ ಅದನ್ನು ನಾವು ವಸ್ತುನಿಷ್ಠತೆ ಅನ್ನಬಹುದಿತ್ತು. ( ಧಾಳಿ ನಡೆದಿದೆಯೆ ಇಲ್ಲವೇ , BJP ಯವರೇ ಮಾಡಿದರೇ ಇಲ್ಲವೇ ಅನ್ನುವುದು ಬೇರೆ ವಿಷಯ ). ಈಗ ನಿಮಗೂ ಸೈಯದ ಬುಖಾರಿಗೂ ಅಭಿಪ್ರಾಯಗಳಲ್ಲಿ ಎನು ವ್ಯತ್ಯಾಸವಿದೆ ಎಂದು ತಿಳಿಯೋಣ ನೀವೇ ಹೇಳಿ ?
" ಕಸಬ್ ನ AK 47 ಧಾಳಿ ಯಲ್ಲಿ ನಿಮ್ಮ ಮನೆಯವರೂ ಮಕ್ಕಳೂ ಬಲಿಪಶುಗಳಾಗಿದ್ದರೆ ಸಹ ನಿಮ್ಮ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೆ? ".

No comments:

Post a Comment