About Me

My photo
BANGALORE, KARNATAKA, India
I think now is the time for me to tell people what I think.

Thursday, May 28, 2009

WHO ARE FUNDAMENTALISTS? ಇದರಲ್ಲಿ ನೀವು ಹೇಳುವ ಮೂಲಭೂತವಾದಿಗಳು ಯಾರು?.....

'ಕೆಂಡಸಂಪಿಗೆ'.net' ಅನ್ನುವ ಕೆಂಪು ಬ್ಲಾಗ್ ನಲ್ಲಿ communist ರು ತಾವು ಸಂಸತ್ ಚುನಾವಣೆಯಲ್ಲಿ ಸೋತರೂ ಸೋನಿಯಾ ಪಕ್ಷ ಅದಿಕಾರಕ್ಕೆ ಬಂದಿದ್ದಕ್ಕೆ ಹರ್ಷಗೊಂಡಿದ್ದಾರೆ. ' ಮೂಲಭೂತವಾದಿಗಳ ' ಸೋಲನ್ನು ಅನಂದಿಸಿದ್ದಾರೆ.

ಮೂಲಭೂತವಾದ ಅಂದರೇನು ಅನ್ನುವುದು ಮೊದಲು ನಮಗೆ ತಿಳಿಯಬೇಕಿದೆ. ಕ್ರೈಸ್ತರ ಪ್ರಕಾರ ದೇವರು ೭ ದಿನಗಳಲ್ಲಿ ವಿಶ್ವವನ್ನು ಮತ್ತು ಅದಮ ಮತ್ತು ಈವರನ್ನು ಪ್ರಥಮವಾಗಿ ನಿರ್ಮಿಸಿದರು. ಅವರು ದೇವರ ಆಣತಿಯನ್ನು ಉಲ್ಲಂಘಿಸಿದ ಕಾರಣ ಸ್ವರ್ಗದಿಂದ ಭೂಮಿಗೆ ದೂಡಲ್ಪಟ್ಟು ತಾವು ಪಾಪಿಗಳಗಿದ್ದಲ್ಲದೆ ನಮ್ಮೆಲ್ಲರನ್ನು ( ನಿಮ್ಮೆಲ್ಲರನ್ನು ) ಕೂಡ ಪಾಪಿಗಳನ್ನಾಗಿಸಿದರು- (ಮೊದಲ ಪಾಪ ). ಸ್ವರ್ಗದಲ್ಲಿ ದೇವರಿದ್ದಾನೆ, satan ಎಂಬಾತ ದೇವರ ಶತ್ರು. ನರಕದ ಪಾಲಕ. ಮನುಷ್ಯರನ್ನು ಪ್ರಲೋಭಿಸುವುದೇ ಇವನ ಕೆಲಸ. ಕನ್ಯೆಯಿಂದ ಜನಿಸಿದ ಜೀಸಸ್ ಆ ದೇವರ ಏಕಮಾತ್ರ ಪುತ್ರ- ಶಿಲುಬೆಯಲ್ಲಿ ನಮ್ಮ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರಾಣ ತೆತ್ತ. ಈ ಪಾಪದಿಂದ ಮುಕ್ತರಾಗಿ ಸ್ವರ್ಗ ಸೇರಲು ಕ್ರೈಸ್ತರಾದರೆ ಮಾತ್ರ ಸಾಧ್ಯ. ಅಲ್ಲದೆ ಈ ವಾಕ್ಯ ವನ್ನು ಎಲ್ಲಾ ಮಾನವರಿಗೂ ಹರಡುವುದು -ತಲುಪಿಸುವುದು ಕ್ರೈಸ್ತರೆಲ್ಲರ ಕರ್ತವ್ಯ. ಆದ್ದರಿಂದ ಎಲ್ಲರನ್ನೂ ಮತಾಂತರಿಸಿ. ಇದು ದೇವರ ಆಣತಿ. ಈಗ ಕ್ಕ್ರೈಸ್ತ ರಲ್ಲಿ ಸುಮಾರು ೫೦೦ ಪಂಗಡಗಳಾಗಿ ಈ ಬಗ್ಗೆ ಅಷ್ಟೇ ಭಿನ್ನಮತಗಳಿವೆ, ಆದರೆ ಬಹುಸಂಕ್ಯಾಕರಾದ ಕ್ಯಾತೊಲಿಕ್ ರ ಪ್ರಕಾರ ಚರ್ಚ್ ಮುಖಾಂತರ ಮಾತ್ರ ಕ್ರೈಸ್ತರಾಗಲು ಸಾಧ್ಯ, ಸತತ ವಾಗಿ ಕ್ರಿಸ್ತನ ಪ್ರಾರ್ಥನೆ ಮಾಡಿದರೆ ಸಂತ ಪದವಿ ಪ್ರಾಪ್ತವಾಗಿ ಪವಾಡಗಳನ್ನು ಮಾಡಬಹುದು. ದೇವರ ಮನುಷ್ಯನ ಸಂಬಂಧ ಚರ್ಚ್ ಮೂಲಕವೇ ಸಾಧ್ಯ. ವಿಕಾಸವಾದವನ್ನು ಇವರು ಒಪ್ಪುವುದಿಲ್ಲ. ಇದು ಕ್ರೈಸ್ತರ ವಾದ.

2. ಇಸ್ಲಾಂ ಪ್ರಕಾರ, ೭ನೇ ಶತಮಾನದ ಅರೇಬಿಯಾದಲ್ಲಿ ಮಹಮ್ಮದ ಎನ್ನುವ ಗೆ -ದೇವದೂತ ' ಗೇಬ್ರಿಯಲ ' ನ ಮೂಲಕ -ದೇವರು ಜನರಿಗೆ ತನ್ನ ಧರ್ಮ ಹಾಗೂ ಶಾಸನ ವನ್ನು ' ಕುರಾನ ' ನಲ್ಲಿ ಹೇಳಿದ್ದಾನೆ. ಎಲ್ಲಾ ಕಾಲಕ್ಕೆ, ಎಲ್ಲಾ ಜನರಿಗೆ ಇದು ಕಡ್ಡಾಯ. ಮಹಮದ್ ಜೀವನ ರೀತಿ ಹಾಗು ಹೇಳಿಕೆಗಳು ಮುಸ್ಲಿಮರಿಗೆ ಮಾದರಿ. ಮೊದಲ ಪಾಪ ಅನ್ನುವದು ಇಲ್ಲ. ದೇವರು 8 ದಿನಗಳಲ್ಲಿ ವಿಶ್ವವನ್ನು ನಿರ್ಮಿಸಿದರು. ಜಗತ್ತಿನ ಎಲ್ಲಾ ವಸ್ತುಗಳೂ, ಪ್ರಾಣಿಗಳೂ ಮಾನವನಿಗೊಸ್ಕರ ಬಳಸಲು ಮತ್ತು ತಿನ್ನಲು ನಿರ್ಮಿತವಾಗಿವೆ. ಜೀಸಸ ಕೂಡ ಲಕ್ಶಾಂತರ ಪ್ರವಾದಿಗಳಲ್ಲಿ ಒಬ್ಬ ಪ್ರವಾದಿ- ಆದರೆ ದೇವರ ಮಗನಲ್ಲ. ಹಾಗೂ ಮಹಮ್ಮದ ಕೊನೆಯ ಪ್ರವಾದಿ. ಅರೇಬಿಯಾದ ಮೆಕ್ಕಾ ಪವಿತ್ರ ಪಟ್ಟಣ, ಎಲ್ಲರೂ ಆ ದಿಕ್ಕಿಗೇ ನಮಾಜ ( ನಮಸ್ಕಾರ) ಮಾಡಬೇಕು. ' ಕುರಾನ ' ನಲ್ಲಿ ಹೇಳಿರುವಂತೆ (- ೭ನೇ ಶತಮಾನದಲ್ಲಿ ತೋಚಬಹುದಾದ್ದೆಲ್ಲ - ಜಗತ್ತು ಹೇಗೆ ನಿರ್ಮಾಣವಾಯಿತು- ಭೂಮಿಯ-ಗಳ ಆಕಾರ, ಸ್ವರ್ಗಗಳ ಸಂಖ್ಯೆ, ಗಾಳಿ, ನಕ್ಷತ್ರ, ಮೋಡ, ಗ್ರಹಗಳ ವಿಚಾರ ವೈಜ್ಞಾನಿಕ ( ? ) ಎಂಬಂತೆ ವಿವರಿಸುವುದಲ್ಲದೆ ಯುಧ್ಧ- ಧರ್ಮಯುದ್ಧ ದಲ್ಲಿ ಸತ್ತವರಿಗೆ ಸ್ವರ್ಗದಲ್ಲಿ ಸಿಗುವ 72 ಅಕ್ಶತ ಕನ್ಯೆಯರ - ಬಾಲಕರ ದೇಹಸೌಂದರ್ಯ, ಸ್ವರ್ಗದಲ್ಲಿನ ಮದಿರೆ ಯ ಹೊಳೆ, ಇತರೆ ಸುಖಗಳು,ಹಾಗೂ ಶೆರಿಯ criminal ಕೋಡ್, shaitan ಎಂಬ ದೈವ ವಿರೊಧಿಯ ಜೊತೆಗಿನ ದೇವರ ನಿರಂತರ ಹೋರಾಟದ ವಿವರ, jinn ಎಂಬ ದೆವ್ವಗಳ, ದೇವರ ಬಂಟರಾದ ಏಂಜೆಲ್ ಗಳ ವರ್ಣನೆ - ಇದರಲ್ಲಿವೆ- ಇವಲ್ಲಿ ಪ್ರತಿಯೊಂದನ್ನೂ ನಾವು ನಂಬಲೇ ಬೇಕು. ) ಪ್ರತಿಯೋಬ್ಬರೂ ಈ ಕುರಾನ್ ಹಾಗೂ ಹದೀತ್ ( ಮಹಮದ್ ನ life style) ಗಳಲ್ಲಿ ಹೇಳಿದಂತೆಯೇ ಜೀವನ ನದೆಸತಕ್ಕದ್ದು. ಸತ್ತನಂತರ ದೇವರು ' ತೀರ್ಪಿನ ದಿನ ' ದಲ್ಲಿ ಪ್ರತಿಯೋಬ್ಬರ ವಿಚಾರಣೆ ನಡೆಸಿ ಸ್ವರ್ಗ ಅಥವಾ ನರಕ ಕ್ಕೆ ಹಾಕುತ್ತಾನೆ. ಕುರಾನ ನಲ್ಲಿ ವಿಧಿಸಲಾದ ಶಾಸನ ' ಶೆರಿಯಾ ' ಎಲ್ಲರಿಗೂ ಕಡ್ಡಾಯ. ಹೇಗಾದರೂ ( ಅಗತ್ಯಬಿದ್ದರೆ ಯುಧ್ಧ ) ಮಾಡಿ ಎಲ್ಲರನ್ನು ಮತಾಂತರಿಸುವುದೇ ಮುಸ್ಲಿಮನ ಪರಮ ಕರ್ತವ್ಯ. ಯಾವನೇ ಮುಸ್ಲಿಮನು ಇಸ್ಲಾಮ ನ್ನು ನಿರಾಕರಿಸಿದರೆ ಅಥವಾ ಮಹಮ್ಮದ್ ನನ್ನು ಪ್ರವಾದಿಯಾಗಿ ಒಪ್ಪದಿದ್ದರೆ ಅವರಿಗೆ ಮರಣ ವೆ ಶಿಕ್ಷೆ . ' ಅಲ್ಲಾ' ನಹೊರತಾಗಿ ಬೇರೆ ದೇವರಿಲ್ಲ. ಬೇರೆ ದೇವರನ್ನು ಪೂಜಿಸುವವರನ್ನು ನಿರ್ನಾಮ ಮಾಡುವುದು ಮುಸ್ಲಿಮರ ಪರಮ ಕರ್ತವ್ಯ. ಇಸ್ಲಾಂ ಧರ್ಮ ಅನುಸರಿಸುವ ದೇಶ ದೇವರ ನಾಡು, ಆದ್ದರಿಂದ ಉಳಿದದ್ದೆಲ್ಲಾ ದೇಶಗಳನ್ನು ಹೇಗಾದರೂ ಮಾಡಿ ' ದೇವರ ನಾಡನ್ನಾಗಿ' ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ. ವಿಕಾಸವಾದ ಸಾಧ್ಯವೇ ಇಲ್ಲ. ಮರಣಾನಂತರದ ( afterlife) ಜೀವನಕ್ಕಾಗಿ ಕುರಾನ ಹೇಳಿದಂತೆ ನಡೆಯಬೇಕು. ರಾಜ್ಯಾಧಿಕಾರ, ನ್ಯಾಯಾಧಿಕಾರ , ವ್ಯವಹಾರ ಎಲ್ಲವು ಕುರ- ಆನ್ ನಲ್ಲಿ ಹೇಳಿದಂತೆ ನಡೆಯಬೇಕು.
ಇದು ಇಸ್ಲಾಂ ನ ವಾದ. ಈಗ ಇಸ್ಲಾಂ ನಲ್ಲಿ 1200 ಪಂಗಡಗಳಿವೆ- ಇವರು ಈಗ ಒಬ್ಬರನ್ನೊಬ್ಬರು ನೀನು ಮುಸ್ಲಿಮನಲ್ಲ ಎಂದು ಎಲ್ಲ ದೇಶಗಳಲ್ಲೂ ( ತಮ್ಮವರನ್ನೂ ಕೂಡ) ಕೊಲ್ಲುತ್ತಿದ್ದಾರೆ -ಆದರೆ ಮೂಲಭೂತ ನಂಬಿಕೆ ಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ( ಹೆಚ್ಚಿನ ವಿವರಗಳಿಗೆ faithfreedom.org ನೋಡಿ ).
(ಅಹಮದೀಯ ಎನ್ನುವ ಪಂಗಡ ಮಾತ್ರ 'ಸೌಮ್ಯ ಶಾಂತ ಇಸ್ಲಾಂ' ನ್ನು ಪ್ರತಿಪಾದಿಸುತ್ತದೆ, ಆದರೆ ಉಳಿದ ಮುಸ್ಲಿಮರು ಇವರನ್ನು ಕಂಡಲ್ಲಿ ಕೊಲ್ಲುತ್ತಿದ್ದಾರೆ.)

3. ಹಿಂದೂಗಳ ಪ್ರಕಾರ ಈ ಸೃಸ್ಟಿಯ ಬಗ್ಗೇ ದೇವರು ಯಾವುದೇ ವಿವರಣೆ ಯನ್ನು ನಮಗೆ ನೀಡಿಲ್ಲ, ಪ್ರಾಚೀನ ಋಶಿಮುನಿಗಳು ನೀಡಿದ ವಿವರಣೆ ವೇದ- ಪುರಾಣ ಗಳಲ್ಲಿವೆ. ಆತ್ಮ ಅವಿನಾಶಿ, ಈ ಜನ್ಮದ ಕರ್ಮದ್ದನುಸಾರ ಪುನರ್ಜನ್ಮ ಲಭ್ಯವಾಗುತ್ತದೆ. ಸನ್ನಡತೆ, ಸಚ್ಚಾರಿತ್ಯ ಉತ್ತಮ ಜನ್ಮ ನೀಡುತ್ತವೆ. ಜಗತ್ತೆಲ್ಲಾ ಮಾನವನಿಗೋಸ್ಕರ ನಿರ್ಮಿಸಲಾಗಿದ್ದಲ್ಲ. ಪ್ರತಿ ಪ್ರಾಣಿಗೂ ಆತ್ಮವಿದೆ, ಜೀವನದ ಉದ್ದೇಶ ಮೋಕ್ಷ - ಅಂದರೆ ಪುನರ್ಜನ್ಮದಿಂದ ಬಿಡುಗಡೆ -ಮಾನವ ಜನ್ಮ ಎಲ್ಲಾ ಜನ್ಮಕ್ಕಿಂತ ಉತ್ತಮ. ದೇವರನ್ನು ಪೂಜಿಸುವ, ನಂಬುವ, ಕಾಣುವ ಮಾರ್ಗ ಅನೇಕವಿರಲು ಸಾಧ್ಯ. ದೇವರು ಅವತಾರಗಳಾಗಿ ಭೂಮಿಯಲ್ಲಿ ಜನಿಸಿದ್ದಾನೆ. ಹಲವು ಜಾತಿಗಳಿವೆ- ಹಲವು ಪಂಗಡಗಳಿವೆ -ಆದರೆ ವಿಕಾಸವಾದ ಸಾಧ್ಯ. ಭಗವದ್ಗೀತೆಯ ಪ್ರಕಾರ ಕರ್ತವ್ಯ, ಕರ್ಮಯೋಗ, ಮನೋ ನಿಗ್ರಹ, ಸಂಯಮ, ಜ್ಞಾನಯೋಗ, ಭಕ್ತಿಯೋಗಗಳನ್ನು ನಾವು ಅನುಸರಿಸಬಹುದಾಗಿದೆ. ದೇವರಲ್ಲಿ ನಂಬಿಕೆ ಕಡ್ಡಾಯವಲ್ಲ, ಸನ್ನಡತೆ ಯೊಂದೇ ಕಡ್ಡಾಯ. ದೇವರ ಮನುಷ್ಯರ ಸಂಬಂಧ ವೈಯುಕ್ತಿಕ. ಧರ್ಮಕ್ಕೆ ಸಂಘಟನೆ ಅಗತ್ಯವಿಲ್ಲ etc., ಇದಲ್ಲದೇ ಹಲವು ಸಾಧು ಸಂತರು ತಮಗೆ ತೋಚಿದಂತೆ ಹಿಂದೂ ಧರ್ಮ ವನ್ನು ಬದಲಾಯಿಸಿದ್ದಾರೆ, ಅವರೆಲ್ಲರಿಗೂ ಅನುಯಾಯಿಗಳಿದ್ದಾರೆ.
( ಬೌದ್ಧ, ಜೈನ, ರದ್ದು ಇದ್ರಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಅಷ್ಟೆ ).

ಇದರಲ್ಲಿ ನೀವು ಹೇಳುವ ಮೂಲಭೂತವಾದಿಗಳು ಯಾರು?.....

No comments:

Post a Comment