ರಿಪಬ್ಲಿಕನ್ ಪಕ್ಷ ( RPI ) ಬಿಡದಿ ಬಳಿಯ ಹಾವಾಡಿಗರ ಬದುಕಿನ ಹಕ್ಕಿಗೆ ಅರಣ್ಯ ಇಲಾಖೆ ಯವರು ತಮ್ಮ ದೌರ್ಜನ್ಯದಿಂದ ಅಡ್ಡಿ ಪಡಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವುದಾಗಿ ಬೆಂಗಳೂರು ತುಂಬಾ poster ಹಾಕಿದೆ. ಸಂತೋಷ, ತಮಗೆ ತೋಚಿದಂತೆ ಬದುಕಲು ಎಲ್ಲರಿಗೂ ಹಕ್ಕಿದೆ, ಜೊತೆಗೆ ಇನ್ನೂ ಹಲವು ಜನರ ಬದುಕಿನ ಹಕ್ಕಿನ ಬಗ್ಗೆಯೂ ಹೋರಾಟ ಮಾಡಬೇಕಿದೆ.
ಉದಾಹರಣೆಗೆ:
ಆಟೋ ಚಾಲಕರ ಸುಲಿಗೆಯ ಬದುಕಿನ ಹಕ್ಕು, ಸರಕಾರೀ ಶಾಲಾ ಅಧ್ಯಾಪಕರ ಮನೆ ಪಾಠದ ಬದುಕಿನ ಹಕ್ಕು, ಸರಕಾರೀ ನೌಕರರ ಫೀಸ್ ನ ಬದುಕಿನ ಹಕ್ಕು , ಜನರನ್ನು' ಒದ್ದು ಒಳಕ್ಕೆ ಹಾಕೂವ ' ಪೊಲೀಸರ ಬದುಕಿನ ಹಕ್ಕು, ಸ್ವರ್ಗದ 72 ಅಕ್ಷತ ಕನ್ಯೆಯರಿಗಾಗಿ ನಮಗೆ ಬಾಂಬ್ ' ಇಡುವ ಭಯೋತ್ಪಾದಕರ ಹಕ್ಕು , ಅದಕ್ಕೆ ಸಮರ್ಥನೆ ಹುಡುಕುವ ಬುದ್ದಿಜೀವಿಗಳ ಜಾಣತನದ ಹಕ್ಕು, ವಚನ ನೀಡುವ - ಮುರಿಯುವ ಕುಮಾರಸ್ವಾಮಿಯವರ ಹಕ್ಕು, ಪುನರ್ಜನ್ಮ ಹೊಂದುವ ದೇವೇಗೌಡರ ಹಕ್ಕು, ಸಿದ್ದರಾಮಯ್ಯನವರ ಸಿಟ್ಟಾಗುವ ಹಕ್ಕು, ಎಂ.ಪಿ. ಪ್ರಕಾಶರ ಮೋಸಹೋಗುವ ಹಕ್ಕು, ಗುಲಾಮರಾಗುವ ಕಾಂಗ್ರೆಸ್ಸಿಗರ ಹಕ್ಕು, ತಮ್ಮ ಕುಟುಂಬ ಮಾತ್ರ ದೇಶ ಸೇವೆ-ಆಡಳಿತ ಮಾಡಬೇಕೆನ್ನುವ ರಾಜಕೀಯ ಕುಟುಂಬಗಳ ಜನಸೇವೆಯ ಹಕ್ಕು, ದರೋಡೆಕೋರರ, ಕಳ್ಳರ ಬದುಕಿನ ಹಕ್ಕು, ಮಾಜಿ ರೌಡಿಗಳ ' ನಾಯಕರಾಗುವ ' ಹಕ್ಕು, ಎಲ್ಲಕ್ಕಿಂತ ' ದಡ್ದರಾಗುವ ' ನಮ್ಮ ಹಕ್ಕು, ಇದನ್ನೆಲ್ಲಾ ರಕ್ಷಿಸಲು ಯಾರು ಹೋರಾಟ ಮಾಡುತ್ತಾರೆ?
About Me
- prabhakar
- BANGALORE, KARNATAKA, India
- I think now is the time for me to tell people what I think.
Monday, June 29, 2009
Subscribe to:
Post Comments (Atom)
No comments:
Post a Comment